==== ಮರಾಠ ಸಾಮ್ರಾಜ್ಯ =====
ಶಿವಾಜಿಯ ತಂದೆ ಯಾರು?
A). ರಾಜಾರಾಮ
B). ಸಾಂಬಾಜಿ
C). ಷಹಜೀ ಬೋಂಸ್ಲೆ
D). ಮೇಲಿನ ಯಾರು ಅಲ್ಲ
(C)
ಷಹಜೀ ಬೋಂಸ್ಲೆ
# ಷಹಜೀ ಬೋಂಸ್ಲೆ ಇವರು ಅಹಮದ್ ನಗರದ ನಿಜಾಂಷಾಹಿ ಸುಲ್ತಾನನ ಬಳಿ ದಂಡನಾಯಕನಾಗಿದ್ದನು.
# ಷಹಜೀ ಬೋಂಸ್ಲೆ ಮತ್ತು ಜೀಜಾಬಾಯಿಯವರ ಪುತ್ರನಾಗಿ ಶಿವಾಜಿಯು ಶಿವನೇರುದುಗ೯ದಲ್ಲಿ ಜನಿಸಿದನು.
2.)ಶಿವಾಜಿಯು ಯಾವ ವಷ೯ ಸಿಂಹಾಸನವನ್ನು ಏರಿದನು?
A). 1665
B). 1666
C). 1660
D). 1674
(D)1674
# ಶಿವಾಜಿಯು ಕ್ರಿ.ಶ 1670 ರಲ್ಲಿ ಸೂರತ್ ನ್ನು ಎರಡನೇ ಬಾರಿಗೆ ಲೂಟಿ ಮಾಡಿದನು.
# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ ಮಹಾರಾಜ ಛತ್ರಪತಿ ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.
# ಶಿವಾಜಿಯು ಕ್ರಿ.ಶ 1680 ರಲ್ಲಿ ತನ್ನ 53 ನೇ ವಯಸ್ಸಿನಲ್ಲಿ ಮರಣಹೊಂದಿದನು.
3.)ಈ ಕೆಳಗಿನ ಯಾವ ಮರಾಠ ದೊರೆಯು "ಮಹಾರಾಜ ಛತ್ರಪತಿ" ಎಂಬ ಬಿರುದನ್ನು ಹೊಂದಿರುವನು?
A). ಷಹಜೀ ಬೋಂಸ್ಲೆ
B). ಶಿವಾಜಿ
C). ಸಾಂಬಾಜಿ
D). ರಾಜಾರಾಮ
(B)
ಶಿವಾಜಿ
# ಶಿವಾಜಿಯು ಕ್ರಿ.ಶ 1627 ರಲ್ಲಿ ಶಿವನೇರುದುಗ೯ದಲ್ಲಿ ಜನಿಸಿದನು.
# ಶಿವಾಜಿಯ ತಂದೆ : ಷಹಜೀ ಬೋಂಸ್ಲೆ ತಾಯಿ : ಜೀಜಾಬಾಯಿ
# ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.
4.)ಶಿವಾಜಿಯು ಯಾರೊಂದಿಗೆ ಪುರಂದರ ಒಪ್ಪಂದವನ್ನು ಮಾಡಿಕೊಂಡನು?
A). ಜಯಸಿಂಗ
B). ಇಮ್ಮಡಿ ಪುಲಕೇಶಿ
C). ಹಷ೯ವಧ೯ನ
D). ಅಕ್ಬರ್
Correct Ans: (A)
Description:
ಜಯಸಿಂಗ
# ಮರಾಠ ದೊರೆಯಾದ ಶಿವಾಜಿಯನ್ನು ನಿಯಂತ್ರಿಸಲು ಔರಂಗಜೇಬನಿಂದ ಕಳುಹಿಸಲ್ಪಟ್ಟ ಜಯಸಿಂಗನು ಕ್ರಿ.ಶ 1665 ಶಿವಾಜಿಯನ್ನು ಸೋಲಿಸಿ ಅವನೊಂದಿಗೆ "ಪುರಂದರ ಒಪ್ಪಂದ" ಮಾಡಿಕೊಂಡನು.
# "ಪುರಂದರ ಒಪ್ಪಂದದ" ಪ್ರಕಾರ ಶಿವಾಜಿಯು ತನ್ನ 73 ಕೋಟೆಗಳನ್ನು ಮೊಘಲರಿಗೆ ಹಿಂದಿರುಗಿಸಿದನು.
5.)ಶಿವಾಜಿಯನ್ನು ಕ್ರಿ.ಶ 1666 ರಲ್ಲಿ ಯಾವ ಮೊಘಲ್ ದೊರೆಯು ಬಂಧಿಸಿದನು.
A). ಅಕ್ಬರ್
B). ಷಹಜಹಾನ್
C). ಔರಂಗಜೇಬ್
D). ಹುಮಾಯೂನ್
Correct Ans: (C)
Description:
ಔರಂಗಜೇಬ್

# "ಪುರಂದರ ಒಪ್ಪಂದದ" ಪ್ರಕಾರ ಶಿವಾಜಿಯು ಆಗ್ರಾಕ್ಕೆ ಬೇಟಿ ನೀಡಿದಾಗ ಔರಂಗಜೇಬ್ ನು ಶಿವಾಜಿ ಮತ್ತು ಅವನ ಮಗ ಸಾಂಬಾಜಿಯನ್ನು ಬಂಧಿಸಿದನು. ಆದರೆ ಶಿವಾಜಿ ಮತ್ತು ಸಾಂಬಾಜಿ ಚಾಣಾಕ್ಷತನದಿಂದ ಬಂಧನದಿಂದ ತಪ್ಪಿಸಿಕೊಂಡು ಮಹಾರಾಷ್ಟ್ರಕ್ಕೆ ಹಿಂದಿರುಗಿದರು.
6.)ಈ ಕೆಳಗಿನವರಲ್ಲಿ ಯಾವ ದೊರೆಯು ಆಡಳಿತದಲ್ಲಿ "ಅಷ್ಟಪ್ರಧಾನ ವ್ಯವಸ್ಥೆ" ಹೊಂದಿರುವನು?
A). ವಿಷ್ಣು ವಧ೯ನ
B). ಮಯೂರವಮ೯
C). ಇಮ್ಮಡಿ ಪುಲಕೇಶಿ
D). ಶಿವಾಜಿ
Correct Ans: (D)
Description:
ಶಿವಾಜಿ
# ಮರಾಠ ದೊರೆಯಾದ ಶಿವಾಜಿಯ ಆಳ್ವಿಕೆಯ ಕಾಲ ಕ್ರಿ.ಶ 1627 - 1680
# ಶಿವಾಜಿಯು ಎಂಟು ಮಂತ್ರಿಗಳನ್ನುಳ್ಳ "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ" ಯನ್ನು ರೂಪಿಸಿದನು
# "ಅಷ್ಟಪ್ರಧಾನ ಆಡಳಿತ ವ್ಯವಸ್ಥೆ"ಯ ಎಂಟು ಮಂತ್ರಿಗಳು
1) ಪೇಶ್ವೆ ಅಥವಾ ಮುಖ್ಯ ಪ್ರಧಾನ : ಇವನು ಪ್ರಧಾನಮಂತ್ರಿ ಆಡಳಿತದ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದನು.
2) ಮಜುಮ್ ದಾರ್ ಅಥವಾ ಅಮಾತ್ಯ : ಹಣಕಾಸು ಮಂತ್ರಿ
3) ಮಂತ್ರಿ ಅಥವಾ ವಖಿಯಾ ನಾವಿಸ್ : ಇವನು ಆಸ್ಥಾನದ ಆಗುಹೋಗುಗಳನ್ನು ದಾಖಲಿಸುವವನು ಆಗಿದ್ದನು.
4) ಸಚಿವ ಅಥವಾ ಸುನ೯ವಿಸ್ : ಇವನು ಮುಖ್ಯ ಕಾಯ೯ದಶಿ೯ಯಾಗಿದ್ದು, ರಾಜನ ಸಂಪಕಾ೯ಧಿಕಾರಿಯಾಗಿದ್ದನು.
5) ಸುಮಂತ ಅಥವಾ ದಾಭಿರ್ : ವಿದೇಶಾಂಗ ಸಚಿವನಾಗಿದ್ದನು.
6) ಸೇನಾಪತಿ ಅಥವಾ ಸಾರ್ - ಇ - ನೌಬತ್ : ಮುಖ್ಯ ಸೇನಾನಿಯಾಗಿದ್ದನು.
7) ಪಂಡಿತ್ ರಾವ್ ಅಥವಾ ದಂಡಾಧ್ಯಕ್ಷ : ಧಾಮಿ೯ಕ ಸಲಹೆಗಾರ, ದಾನ ದತ್ತಿಗಳ ಮೇಲ್ವಿಚಾರಕನಾಗಿದ್ದನು.
8) ನ್ಯಾಯಾಧೀಶ : ಮುಖ್ಯ ನ್ಯಾಯಾಧೀಶನಾಗಿದ್ದನು.
7.)ಶಿವಾಜಿ ಆಡಳಿತದಲ್ಲಿ ಸರ್ನೋಬತ್ ಎಂದರೆ..........
A). ಗ್ರಾಮ ಮುಖಂಡ
B). ಗುಮಾಸ್ತ
C). ಸೈನೈಧಿಕಾರಿ
D). ಭೂ ದಾಖಲೆ ಇಡುವವ
Correct Ans: (C)
Description:
ಸೈನೈಧಿಕಾರಿ
# ಶಿವಾಜಿ ಆಡಳಿತದಲ್ಲಿ ಸೇನಾಪತಿಗೆ (ಸರ್ನೋಬತ್) - ಸೈನ್ಯದ ಮಹಾದಂಡನಾಯಕ. ಸೈನಿಕರು ನೇಮಕ, ಶಿಸ್ತು, ದಕ್ಷತೆ ಇವನಿಗೆ ಸೇರಿದ್ದಿತು. ಶಿವಾಜಿಯ ಸೇನಾಪತಿ "ಹಂಬಿರರಾವ ಮೋಹಿತೆ" ನಾಗಿದ್ದನು.
8) ಶಿವಾಜಿ ಆರಂಭದಲ್ಲಿ ನಿಗದಿಪಡಿಸಿದ್ದ ಭೂ ಕಂದಾಯ ಪ್ರಮಾಣವು ಶೇ .............
A). 33
B). 60
C). 44
D). 70
Correct Ans: (A)
Description:
33
# ಶಿವಾಜಿ ಆರಂಭದಲ್ಲಿ ಶಿವಾಜಿ ಕತಿ ಎಂಬ ಕಟ್ಟಿಗೆ ಮಾಪನ ಬಳಸಿ, ಭೂ ಸವೇಕ್ಷಣೆ ಮಾಡಿಸಿ ಫಲವತ್ತೆಗೆ ತಕ್ಕಂತೆ ಭೂ ಕಂದಾಯವನ್ನು ನಿಗದಿಪಡಿಸಿದನು ಒಟ್ಟು ಉತ್ಪನ್ನದ ಶೇ 33% ಭಾಗವನ್ನು ಭೂ ಕಂದಾಯವಾಗಿ ನಿಗದಿಪಡಿಸಿದನು.
9.) ಶಿವಾಜಿ ನಂತರದ ಕಾಲದಲ್ಲಿ ಭೂ ಕಂದಾಯ ಶೇ 33 ರಿಂದ......ಗೆ ಹೆಚ್ಚಾಯಿತು?
A). 40%
B). 37%
C). 35%
D). 55%
Correct Ans: (A)
Description:
40%
# ಶಿವಾಜಿ ನಂತರದ ಕಾಲದಲ್ಲಿ ಇತರ ತೆರಿಗೆಗಳನ್ನು ರದ್ದುಪಡಿಸಿ ಅದನ್ನು ಶೇ .40% ಕ್ಕೆ ಹೆಚ್ಚಿಸಲಾಯಿತು ಭೂ ಕಂದಾಯವನ್ನು ಹಣ ಇಲ್ಲವೆ ಧ್ಯಾನವನ್ನು ಕಂತುಗಳ ರೂಪದಲ್ಲಿ ಕೊಡಲು ಆರಂಭ ಮಾಡಿದನು.
10.) ಶಿವಾಜಿಯ ಮುಖ್ಯ ಸೇನಾ ವಿಭಾಗಗಳಾವುವು?
1) ಅಶ್ವಪಡೆ 2)ಫಿರಂಗಿ ಪಡೆ 3)ಕಾಲು ಪಡೆ 4) ಗಜಪಡೆ
A). 1 ಮತ್ತು 2
B). 2 ಮತ್ತು 3
C). 1.2. ಮತ್ತು 3
D). 1.2.3.4
Correct Ans: (D)
Description:
1.2.3.4
# ಶಿವಾಜಿಯ ಸೈನ್ಯವು ಮುಖ್ಯ ಶಿವಾಜಿಯ ಸೈನ್ಯವು ಕಾಲ್ದಳ, ಅಶ್ವಪಡೆ, ಗಜಪಡೆ, ಒಂಟೆಪಡೆ, ನೌಕಪಡೆ, ಮತ್ತು ಫಿ
ರಿಂಗಿಪಡೆಗಳಿಂದ ಕೂಡಿತ್ತು. ಅವನ ಬಳಿ 1 ಲಕ್ಷ ಮಾವಳಿಗಳು, 60,000 ಶಿಲಾಹ್ದಾದರು, 45,000 ಅಶ್ವಪಡೆ, 1260 ಆನೆಗಳು, 3000 ಒಂಟೆಗಳು ಮತ್ತು 80 ಫಿರಂಗಿಗಳಿದ್ದವು, ಸೈನ್ಯದ ಮೇಲ್ವಿಚಾರಣೆ ಮಹಾದಂಡ ನಾಯಕನಿಗೆ ಸೇರಿತ್ತು.
11.) ಶಿವಾಜಿಯ ಕೋಟೆಯ ಅಧಿಕಾರಿ............
A). ಸಬ್ನೀಸ್
B). ಹವಾಲ್ದಾರ್
C). ದುರ್ಗಪಾಲಿ
D). ಸರ್ನೋಬತ್
Correct Ans: (D)
Description:
ಸರ್ನೋಬತ್
# ಶಿವಾಜಿ ಕೋಟೆಯಲ್ಲಿ ಹಜಾರಿಗಳ ಮೇಲೆ ಒಬ್ಬ ಸರ್ನೋಬತ್ ಅಧಿಕಾರ ಅಥವಾ ಮೇಲ್ವಿಚಾರಣೆ ಹೊಣೆ ಹೊತ್ತಿದ್ದರು. ಸೇನಾಪತಿ ಕಾಲ್ದಳದ ಮುಖ್ಯಸ್ಥನಾಗಿದ್ದನು. ಯುದ್ದದ್ದಲಿ ಶಿವಾಜಿಯೇ ಸರ್ವೋಚ್ಛ ಸೇನಾಪತಿಯಾಗಿ ಸ್ವತ: ನಾಯಕತ್ವ ವಹಿಸಿತುತ್ತಿದ್ದನು ಹವಾಲ್ದಾರ 50 ಜುಮ್ಲಾದಾರ 100 ಹಜಾರಿ 1000 ಸೈನಿಕರಿಗೆ ನಾಯಕರಾಗಿದ್ದರು ಸರ್ನೋಬತ್ ಕೈ ಕೆಳಗೆ 7000 ಸೈನಿಕರಿದ್ದರು.
12.) ಮರಾಠರ ಗ್ರಾಮಾಡಳಿತದ ಮುಖ್ಯಸ್ಥ...............
A). ದೇಶಪಾಂಡೆ
B). ಪಟೇಲ
C). ಕನಕಲ್
D). ದೇಶಮುಖ್
Correct Ans: (B)
Description:
ಪಟೇಲ
#ಶಿವಾಜಿ ಆಡಳಿತ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ ವಿಂಗಡಿಸಿದನು.ಗ್ರಾಮ ಆಡಳಿತದ ಕಡೆಯ ಆಡಳಿತ ಘಟಕವಾಗಿದ್ದು. ಗ್ರಾಮಾಡಳಿತ ಪಟೇಲನಿಗೆ ಸೇರಿತ್ತು.ಗ್ರಾಮ ಮುಖಂಡನಾದ ಪಟೇಲ ನೆರವಿಗೆ ಗ್ರಾಮ ಪಂಚಾಯಿತಿಗಳಿದ್ದವು.
13.) ಶಿವಾಜಿ ಯಾವಾಗ ಜನಿಸಿದನು?
A). ಕ್ರಿ.ಶ.1625
B). ಕ್ರಿ.ಶ.1627
C). ಕ್ರಿ.ಶ.1647
D). ಕ್ರಿ.ಶ.1628
Correct Ans: (B)
Description:
ಕ್ರಿ.ಶ.1627
ಶಿವಾಜಿಯು ಏಫ್ರೀಲ್ 20, 1627 ಪೂನಾ ಬಳಿಯ ಶಿವನೇರುದುಗ೯ದಲ್ಲಿ ಜನಿಸಿದನು. ಶಿವಾಜಿಯ ತಂದೆ ಷಹಜೀ ಬೋಂಸ್ಲೆ, ತಾಯಿ ಜೀಜಾಬಾಯಿ. ಶಿವಾಜಿಯು ಕ್ರಿ.ಶ 1674 ರಲ್ಲಿ "ರಾಯಗಡ" ದಲ್ಲಿ "ಮಹಾರಾಜ ಛತ್ರಪತಿ" ಎಂಬ ಬಿರುದಿನೊಂದಿಗೆ ಸಿಂಹಾಸನ ಏರಿದನು.
14.) ಶಿವಾಜಿಯ ನೌಕ ನೆಲೆ ಎಲ್ಲಿತ್ತು ?
A). ಕೊಲಾಬಾ
B). ಕಲ್ಯಾಣ
C). ಬೆಸ್ಸಿನ್
D). ಸಾಲ್ಸಿಟಿ
Correct Ans: (A)
Description:
ಕೊಲಾಬಾ
# ಚೋಳರು ಬಿಟ್ಟರೆ ಭಾರತದಲ್ಲಿ ನೌಕ ಪಡೆಗೆ ಹೆಚ್ಚಿನ ಗಮನ ನೀಡಿದ ಕೀರ್ತಿ ಶಿವಾಜಿಗೆ ಸಲ್ಲುತ್ತದೆ. ಅವನು ದೌಲತಖಾನ್ ನೇತೃತ್ವದಲ್ಲಿ ಒಂದು ನೌಕಪಡೆ ನಿರ್ಮಿಸಿದನು ಕೋಲಾಬ ಅದರ ಕೇಂದ್ರವಾಗಿತ್ತು.
15.) ಬಾಲಾಜಿ ವಿಶ್ವನಾಥನು ಪೇಶ್ವೆಯಾದದು _________ರಲ್ಲಿ
A). 1712
B). 1713
C). 1715
D). 1718
Correct Ans: (B)
Description:
1713
# ಬಾಲಾಜಿ ವಿಶ್ವನಾಥನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಜಿಂಜಿರಾಧ ಶ್ರೀ ವರ್ಧನ ಎಂಬಲ್ಲಿ ಜನಿಸಿದನು.
16.) ಶಿವಾಜಿಯ ಆಧ್ಯಾತ್ಮಕ ಗುರು ಯಾರು?
A). ರಾಮದಾಸ
B). ರೈದಾಸ
C). ದಾದಾಜಿಕೊಂಡದೇವ
D). ಶಂಕರದೇವ
Correct Ans: (A)
Description:
ರಾಮದಾಸ
#ಶಿವಾಜಿಯ ಬಾಲ್ಯದಲ್ಲಿ ತಂದೆಯ ಪ್ರೀತಿಯನ್ನು ಪಡೆಯುವಲ್ಲಿ ವಂಚಿತನಾದನು.ತಾಯಿ- ಜೀಜಾಬಾಯಿ,ದಾದಾಜಿಕೊಂಡದೇವ ಮತ್ತು ಗುರು ರಾಮದಾಸರು ಅವನನ್ನು ಮಹಾಯೋಧನನ್ನಾಗಿ ಸ್ವಧರ್ಮ ಮತ್ತು ಸ್ವರಾಜ್ಯ ನಿರ್ಮಾಣ ಕಾರನ್ನಾಗಿ ಪರಿವರ್ತಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
17.) ಶಿವಾಜಿ ಯಾವಗ ಸೂರತನ್ನು 2 ಬಾರಿ ಲೂಟಿ ಮಾಡಿದನು.
A). 1664 ಮತ್ತು 1670
B). 1665 ಮತ್ತು 1871
C). 1666 ಮತ್ತು 1672
D). 1667 ಮತ್ತು 1675
Correct Ans: (A)
Description:
1664 ಮತ್ತು 1670
#1664-1670 ರ ಜನವರಿ 20 ರಂದು ಶಿವಾಜಿ ಮೊಗಲರ ಶ್ರೀಮಂತ ರೇವುಪಟ್ಟಣವಾದ ಸೂರತನ್ನು ಮುತ್ತಿ ಲೂಟಿ ಮಾಡಿದನು ಸುಮಾರು 1 ಕೋಟಿ.ರೂ ಸಂಪತ್ತು ಅವನ ವಂಶವಾಯಿತು. 1670- 2 ನೇ ಬಾರಿಗೆ ಸೂರತನ್ನು ಮುತ್ತಿ 66 ಲಕ್ಷ ರೂ ಸಂಪತ್ತನ್ನು ದೋಚಿದನು.
18.) ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ಶ್ರೇಷ್ಠರು?
A). ಸಚಿವ
B). ಅಮಾತ್ಯ
C). ಸುಮುಂತ
D). ಪೇಶ್ವ
Correct Ans: (B)
Description:
ಅಮಾತ್ಯ
ಶಿವಾಜಿ ಅಷ್ಠ ಪ್ರಧಾನರಲ್ಲಿ ಅಮಾತ್ಯ (ಮಜುಂದಾರ್) ಅರ್ಥ ಸಚಿವ, ಕಂದಾಯ ಮಂತ್ರಿ ಸಾರ್ವಜನಿಕ ಅದಾಯ ಖರ್ಚು-ವೆಚ್ಚ ವೀಕ್ಷಿಸುವುದು ಸಾರ್ವಜನಿಕ ಲೆಕ್ಕ ಪತ್ರಗಳನ್ನು ಪರಿಶೀಲಿಸುವುದು ಇವನ ಕರ್ತವ್ಯಗಳಾಗಿದ್ದು ಮಜುಂದಾರ ಅವನ ಮತ್ತೊಂದು ಹೆಸರು ರಾಮಚಂದ್ರ ನೀಲಕಂಠ.
19.) ಕೃಷ್ಣಾದಿಂದ ಅಟ್ಟೋಕವರಗೆ ಮರಾಠ ಧ್ವಜ ಹಾರಡಲು ಹೀಗೆಂದು ಹೇಳಿದವರು...
A). 1 ನೇ ಬಾಜಿರಾಯ
B). ಬಾಲಾಜಿರಾವ
C). ಬಾಲಾಜಿ ವಿಶ್ವನಾಥ
D). ಶಿವಾಜಿ
Correct Ans: (A)
Description:
1 ನೇ ಬಾಜಿರಾಯ
ಒಂದನೇ ಬಾಜಿರಾಯ (ಕ್ರಿ.ಶ.1720-1740) ಬಾಲಾಜಿ ವಿಶ್ವನಾಥನ ಮರಣದ ನಂತರ ಅವನ ಹಿರಿಯ ಮಗ ಒಂದನೇ ಬಾಜೀರಾಯನನ್ನು ತನ್ನ ಪೇಶ್ವೆಯಾಗಿ ನೇಮಿಸಿಕೊಂಡನು. ಮೊಗಲ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು. ಅವನು ಮರಾಠ ಮುಖಂಡರಿಗೆ ಹೀಗೆ ಹೇಳಿದನು."ಇದೀಗ ಹಿಂದೂಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದ್ದವಾಗಿದೆ. ಮೊಗಲ ಸಾಮ್ರಾಜ್ಯವು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಅದರ ಕೊಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ." ಹಾಗದಲ್ಲಿ ಮರಾಠ ಧ್ವಜವನ್ನು ಕೃಷ್ಣಾ ನದಿಯಿಂದ ಅಟ್ಟೋಕವರೆಗೆ (ಸಿಂಧೂ ನದಿ) ಹಾರಾಡುವಂತೆ ಮಾಡೋಣ " ಸಾಹು ಪೇಶ್ವೆಯ ನೀತಿಯನ್ನು ಬೆಂಬಲಿಸಿ "ನಿನ್ನ ಹೆಮ್ಮರವನ್ನು ಹಿಮಾಲಯದ ಅಡಿಯಲ್ಲಿ ಬಿತ್ತು ನಿಜಕ್ಕೂ ನೀನು ತಂದಗೆ ತಕ್ಕ ಮಗ". ಹೇಳಿದನು.
20.) ಶಿವಾಜಿ ಯಾವ ಮೊಗಲ್ ದಂಡನಾಯಕನೊಡನೆ ಪುರಂದರ ಒಪ್ಪಂದ ಮಾಡಿಕೊಂಡನು?
A). ದಿಲವಾರಖಾನ್
B). ಜೈಸಿಂಗ್
C). ಬಹದ್ದೂರ್ ಖಾನ್
D). ಜಸ್ವಂತ್ ಸಿಂಗ್
Correct Ans: (B)
Description:
ಜೈಸಿಂಗ್
#ಪುರಂದರ ಗಡ ಒಪ್ಪಂದ (ಜೂನ 22, 1665) ಮೊಗಲರ ದಾಳಿಗಳಿಂದ ಮರಾಠರಿಗೆ ತುಂಬಾ ಹಾನಿಯಾಯಿತು. ಮಾವಳಿ ಮುಖಂಡ ಮುನಾರಬಾಜಿ ದೇಶಪಾಂಡೆ 300 ಮಾವಳಿಗಳೊಂದಿಗೆ ಹೋರಾಡಿ ಹತನಾದನು. ವಿಧಿ ಇಲ್ಲದೆ ಶಿವಾಜಿ ರಾಯಗಡವನ್ನು ಉಳಿಸಿಕೊಳ್ಳಲು ಜೈಸಿಂಗನೊಡನೆ ಪುರಂದರಗಢ ಒಪ್ಪಂದ ಮಾಡಿಕೊಂಡನು.
21.) ಶಿವಾಜಿಗೆ ಕಿರೀಟ ಧಾರಣೆಯಾ
ದ ವರ್ಷ........
A). ಕ್ರಿ.ಶ.1774
B). ಕ್ರಿ.ಶ.1778
C). ಕ್ರಿ.ಶ.1672
D). ಕ್ರಿ.ಶ.1674
Correct Ans: (D)
Description:
ಕ್ರಿ.ಶ.1674
#ಶಿವಾಜಿಯ ಕಿರೀಟಧಾರಣೆ ಜೂನ್ 16, 1674 ರಂದು ರಾಯಗಡದಲ್ಲಿ ಶಿವಾಜಿ ಪಟ್ಟಾಭಿಷಿಕ್ತನಾಗಿ ’ ಛತ್ರಪತಿ’ ಎಂಬ ಬಿರುದು ಗಳಿಸಿದನು ಛತ್ರಪತಿ ಎಂದರೆ ರಾಜರ ರಾಜ ಎಂದರ್ಥ.
22.) ಶಿವಾಜಿ ಮರಣ ಹೊಂದಿದ ವರ್ಷ..........
A). ಕ್ರಿ.ಶ.1680
B). ಕ್ರಿ.ಶ.1984
C). ಕ್ರಿ.ಶ.1686
D). ಕ್ರಿ.ಶ.1690
Correct Ans: (A)
Description:
ಕ್ರಿ.ಶ.1680
#ಶಿವಾಜಿ ಬೆಂಗಳೂರನ್ನು ಆಕ್ರಮಿಸಿ ಅದನ್ನು ಏಕೋಜಿಗೆ ಒಪ್ಪಿಸಿದನು. ಶ್ರೀರಂಗಪಟ್ಟಣವನ್ನು ಮುತ್ತಿ ಅದನ್ನು ಕೊಳ್ಳೆ ಹೊಡೆದನು. 1678 ರಲ್ಲಿ ತುಂಗಭದ್ರ ನದಿಯ ಉತ್ತರ ಭಾಗ ಅವನ ಕೈ ಸೇರಿತು. ಏಫ್ರಿಲ್ 14, 1680 ರಂದು ಶಿವಾಜಿ ತನ್ನ 53 ವಯಸ್ಸಿನಲ್ಲಿ ತೀರಿಕೊಂಡನು.
23.) ಶಿವಾಜಿ ತನ್ನ ರಾಜ್ಯವನ್ನು .......... ಭಾಗಗಳಾಗಿ ವಿಭಾಗಿಸಿದ್ದನು?
A). 2
B). 3
C). 4
D). 5
(C)
#ಶಿವಾಜಿ ಆಡಳಿತದ ಅನುಕೂಲಕ್ಕಾಗಿ ಸಾಮ್ರಾಜ್ಯವನ್ನು 4 ಪ್ರಾಂತ್ಯಗಳಾಗಿ (ಪೂನಾ,ಕೊಂಕಣ,ಉತ್ತರ ಕಾರವಾರ, ಸೂರತ್) ನಲ್ಲಿ ವಿಂಗಡಿಸಿದ್ದನು. ಪ್ರತಿ ಪ್ರಾಂತ್ಯಕ್ಕೆ ಒಬ್ಬೊಬ್ಬ ರಾಜ್ಯಪಾಲರನನ್ನು (ಸುಬೇದಾರ) ನೇಮಿಸಿದನು. ಅವನ ನೆರವಿಗೆ ಅಷ್ಠ ಪ್ರಧಾನರು ಎಂಬ 8 ಅಧಿಕಾರಿಗಳ ವರ್ಗದವರು ಇರುತ್ತಿದ್ದರು. ಪ್ರಾಂತ್ಯಗಳನ್ನು ಮತ್ತೆ ಜಿಲ್ಲೆಗಳಾಗಿ ವಿಭಾಗಿಸಿದ್ದನು.
24.) ಶಿವಾಜಿ ನೆರಹೊರೆ ರಾಜ್ಯಗಳಿಂದ ಸಂಗ್ರಹಿಸುತ್ತಿದ್ದ ಸರ್ದೇಶಮುಖಿ ತೆರಿಗೆ ಪ್ರಮಾಣ.........
A). ಆ ಪ್ರದೇಶದ ವಾರ್ಷಿಕ ಆದಾಯದ 1/5 ಭಾಗ
B). ಆ ಪ್ರದೇಶದ ವಾರ್ಷಿಕ ಆದಾಯದ 1/6 ಭಾಗ
C). ಆ ಪ್ರದೇಶದ ವಾರ್ಷಿಕ ಆದಾಯದ 1/2 ಭಾಗ
D). ಆ ಪ್ರದೇಶದ ವಾರ್ಷಿಕ ಆದಾಯದ 1/10
(D)
Description
ಆ ಪ್ರದೇಶದ ವಾರ್ಷಿಕ ಆದಾಯದ 1/10
#ಚೌತ್ ಮತ್ತು ಸರದೇಶಮುಖಿ ತೆರಿಗೆಗಳು ಮಹಾರಾಷ್ಟ್ರವು ಬೆಟ್ಟ ಗುಡ್ಡಗಳಿಂದ ಆವೃತ್ತ ಪ್ರದೇಶವಾದ್ದರಿಂದ ಬೊಕ್ಕಸಕ್ಕೆ ಹೆಚ್ಚಿನ ಭೂ ಕಂದಾಯ ಬರುತ್ತಿರಲಿಲ್ಲ ಹೀಗಾಗಿ ಸರ್ಕಾರ ನಡೆಸುವುದು ಕಷ್ಠಕರವಾಯಿತು.ಆದ ಕಾರಣ ಶಿವಾಜಿ ತನ್ನ ಅಧೀನದ ನೆರೆಹೊರೆಯ ಪ್ರಾಂತ್ಯಗಳ ಮೇಲೆ ಚೌತ ಮತ್ತು ಸರದೇಶಮುಖಿ ಎಂಬೆರಡು ಮಿಲಿಟರಿ ತೆರಿಗೆಗಳನ್ನು ವಿಧಿಸಿ ಸಂಗ್ರಹಿಸಿದನು. ಅವನು ತನ್ನ ಸಾಮ್ರಜ್ಯದ ಹೊರಗಿದ್ದ ಪ್ರದೇಶಗಳಿಂದ ಸಂಗ್ರಹಿಸುತ್ತಿದ್ದನು.ಅವು ಕ್ರಮವಾಗಿ ಒಟ್ಟು ಆ ಪ್ರದೇಶದ ವಾರ್ಷಿಕ ಆದಾಯದ 1/4 ಮತ್ತು 1/10 ಭಾಗಗಳಾಗಿದ್ದವು.
25.) ಪ್ರಥಮ ಪೇಶ್ವೆ ಯಾರು?
A). ಬಾಲಾಜಿ ಬಾಜಿರಾಯ
B). ಬಾಲಾಜಿ ವಿಶ್ವನಾಥ
C). 1ನೇಯ ಬಾಜಿರಾಯ
D). ಮಾಧವರಾವ್
Correct Ans: (B)
Description:
ಬಾಲಾಜಿ ವಿಶ್ವನಾಥ
ಬಾಲಾಜಿ ವಿಶ್ವನಾಥ (1713-1720) ನು ಮರಾಠರ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ. ಇವನ ಆರಂಭ ಹೆಸರು ಬಾಲಾಜಿ ಭಟ್ಟ ಬಾಲಾಜಿ 1660 ರಲ್ಲಿ ಬೆಂಜಿರಾದ ಶ್ರೀವರ್ಧನ ಎಂಬಲ್ಲಿ ಜನಿಸಿದನು. ಈತ ಮಹಾರಾಷ್ಟ್ರದ ಚಿತ್ಪಾವನ ಬ್ರಾಹ್ಮಣ ಕುಟುಂಬಕ್ಕೆ ಸೇರಿದ್ದನು.
26.) ಮರಾಠರು ತಮ್ಮ ಗೆಲುವಿಗೆ ನೆರವಾಗುತ್ತಿದ್ದ ಗೆರಿಲ್ಲಾ ಯುದ್ದತಂತ್ರವನ್ನು ಯಾರಿಂದ ಕಲಿಯುತ್ತಿದ್ದರು ?
A). ಬಿಜಾಪುರ ಸುಲ್ತಾನನಿಂದ
B). ಮೀರಜಾಹರ
C). ಷಹಜಿಯಿಂದ
D). ಅಹಮದನಗರದ ಮಂತ್ರಿ ಮಲ್ಲಿಕ್ ಅಂಬರ್
Correct Ans: (D)
Description:
ಅಹಮದನಗರದ ಮಂತ್ರಿ ಮಲ್ಲಿಕ್ ಅಂಬರ್
#ಶಿವಾಜಿ ಸೈನ್ಯದಲ್ಲಿ ಮೊಗಲರ ವಿರುದ್ದ ಗೆರಿಲ್ಲಾ ಯುದ್ದ ತಂತ್ರವನ್ನು ಬಳಸಿದನು ಮಹಾರಾಷ್ಟ್ರವು ಬೆಟ್ಟಗುಡ್ಡಗಳಿಂದ ಕೂಡಿದ್ದು ಅಲ್ಲಿ ಸೈನ್ಯ ಅವಿತುಕೊಂಡು ಇದ್ದಕ್ಕಿದಂತೆ ಶತ್ರುಗಳ ಮೇಲೆ ದಾಳಿ ಮಾಡುವ ತಂತ್ರವೇ ಗೆರಿಲ್ಲಾ ಯುದ್ದ ತಂತ್ರವಾಗಿತ್ತು.ಇದು ಆಗಾಧವಾಗಿದ್ದ ಮೊಗಲ ಸೇನಗೆ ದಿಕ್ಕೆಟ್ಟಿಸಿತು. ಈ ತಂತ್ರ ಮರಾಠ ಸೈನ್ಯದ ವಿಶಿಷ್ಠ ಅಂಗವಾಗಿತ್ತು.
27.) ಶಿವಾಜಿಯ ಅಷ್ಠ ಪ್ರಧಾನರಲ್ಲಿ ಯಾರು ವಿದೇಶಾಂಗ ವ್ಯವಹಾರ ನೋಡಿಕೊಳ್ಳುತ್ತಿದ್ದರು?
A). ಪೇಶ್ವೆ
B). ಮಂತ್ರಿ
C). ಸುಮಂತ
D). ಸಜೀವ
Correct Ans: (C)
Description:
ಸುಮಂತ
ಶಿವಾಜಿಯ ಅಷ್ಠ ಪ್ರಧಾನರಲ್ಲಿ ಸುಮಂತ ದಬೀರ, ವಿದೇಶಾಂಗ ಮಂತ್ರಿ ರಾಯಭಾರಿಗಳ ನೇಮಕ, ಯುದ್ದ ಕುರಿತು ರಾಜನಿಗೆ ಸಲಹೆ ನೀಡುವುದು ಇವನ ಕರ್ತವ್ಯವಾಗಿತ್ತು. ಶಿವಾಜಿಯ ಸುಮಂತ ರಾಮಚಂದ್ರ ತಿಯಂಬಕ್....
28.) ಶಿವಾಜಿಯ ಅಷ್ಠ ಪ್ರಧಾನರಲ್ಲಿ ಸೈನ್ಯದ ಮೇಲ್ವಿಚಾರಣೆ ಯಾರಿಗೆ ಸೇರಿತ್ತು?
A). ಅಮಾತ್ಯ
B). ಸೇನಾಪತಿ
C). ಸಾಮಂತ
D). ಪೇಶ್ವೆ
Correct Ans: (B)
Description:
ಸೇನಾಪತಿ
ಶಿವಾಜಿ ಆಷ್ಠ ಪ್ರಧಾನರಲ್ಲಿ ಸೈನ್ಯದ ಸೇನಾಪತಿ (ಸರ್ನೋಬತ್) ಸೈನ್ಯದ ಮಹಾದಂಡ ನಾಯಕ ಸೈನಿಕರ ನೇಮಕ, ದಕ್ಷತೆ ಇವನಿಗೆ ಸೇರಿದ್ದಿತ್ತು. ಶಿವಾಜಿಯ ಸೇನಾಪತಿ ಹಂಬಿರರಾವ ಮೋಹಿತೆ.
29.) 3 ನೇ ಪಾಣಿಪತ್ ಕದನದಲ್ಲಿ ಮರಾಠರ ಕಡೆ ಸತ್ತವರ ಸಂಖ್ಯೆ............
A). 1 ಲಕ್ಷ
B). 28,000
C). 25,000
D). 1,28,000
Correct Ans: (B)
Description:
28,000
3 ನೇ ಪಾಣಿಪತ ಕದನ 1761 ರಲ್ಲಿ ನಡೆಯಿತು. 3 ಪಾಣಿಪತ್ ಕದನ ಭಾರತದ ನಿರ್ಣಾಯಕ ಕದನಗಳಲ್ಲಿ ಒಂದು. ಅದು ಭಾರತದ ಅದೃಷ್ಠವನ್ನು ನಿರ್ಧರಿಸಿತು. ಇದು ಭಾರತದ ಇತಿಹಾಸದಲ್ಲಿ ಒಂದು ಕ್ರಾಂತಿಕಾರಿ ಘಟನೆಯಾದ ಇದು ಬೀರಿದ ಪರಿಣಾಮಗಳು ಈ ಮುಂದಿನಂತಿವೆ. ವಿನಾಶ - 3 ಪಾಣಿಪತ್ ಕದನದಲ್ಲಿ ಒಟ್ಟು 28,000 ಸೈನಿಕರು 50,000 ಕುದುರೆಗಳು, 500 ಆನೆಗಳು, 2 ಲಕ್ಷ ದನಗಳು ಸೇರಿದಂತೆ ಒಟ್ಟು 1 ಲಕ್ಷ ಸೈನಿಕರು ಹತರಾದರು. ಕದನದ ಪ್ರತ್ಯಕ್ಷದರ್ಶಿ ಕಾಶಿರಾಜ ಪಂಡಿತ ಹೇಳಿರುವಂತೆ "ಪಾಣಿಪತ್ ಕದನ ನಿಜಕ್ಕೂ ಮರಾಠ ಜನತೆಯ ಪ್ರಳಯದ ದಿನವಾಗಿತ್ತು".
30.) "ಬೀಳುತ್ತಿರುವ ಒಣ ಮರಕ್ಕೆ ಕೊಡಲಿ ಪೆಟ್ಟು ಹಾಕೋಣ ಅದರ ರೆಂಬೆ ಕೊಂಬೆಗಳು ತಾವಾಗಿಯೇ ಉದುರುತ್ತವೆ" ಹೀಗೆಂದು ಹೇಳಿಕೆ ನೀಡಿದವರು?
A). ಬಾಲಾಜಿ ವಿಶ್ವನಾಥ
B). 1ನೇ ಬಾಜಿರಾಯ
C). ಬಾಲಾಜಿ ಬಾಜಿರಾಯ
D). ಸಾಹು
Correct Ans: (B)
Description:
1ನೇ ಬಾಜಿರಾಯ
ಮೊಗಲ್ ಚಕ್ರವರ್ತಿಗಳ ದೌರ್ಬಲ್ಯದ ಪೂರ್ಣ ಲಾಭ ಪಡೆಯಲು ಮುಂದಾದನು ಅವನು ಮರಾಠ ಮುಂಖಡರಿಗೆ ಹೀಗೆ ಹೇಳಿದನು. ಇದೀಗ ಹಿಂದೂ ಸ್ಥಾನದಿಂದ ಪರಕೀಯರನ್ನು ಹೊರ ಹಾಕುವ ಕಾಲ ಸನ್ನದುವಾಗಿದೆ. ಮೊಗಲ ಸಾಮ್ರಾಜ್ಯವನ್ನು ಒಂದು ಬಾಡುತ್ತಿರುವ ಮರ ಅದರ ಕಾಂಡವನ್ನು ನಾವು ಹೊಡೆಯೋಣ ಆದರೆ ಕೂಂಬೆಗಳು ತಾವಾಗಿಯೇ ಉರುಳಿ ಬೀಳುತ್ತವೆ.
31.) ಹಿಂದೂ ಪಾದ್ ಪಾದ್ ಷಾ ( ಮರಾಠ ಒಕ್ಕೂಟ ) ಪರಿಕಲ್ಪನೆ ಹೊರಡಿಸಿದ ಪೇಶ್ವೆ ಯಾರು?
A). ಬಾಲಾಜಿ ವಿಶ್ವನಾಥ
B). 1 ನೇ ಬಾಜೀರಾಯ
C). ಬಾಲಾಜಿ ಬಾಜೀರಾವ
D). ನಾರಾಯಣರಾವ
Correct Ans: (B)
Description:
1 ನೇ ಬಾಜೀರಾಯ
ಹಿಂದೂ ಷಾದಷಾಹಿ 1 ನೇ ಬಾಜೀರಾಯನು ಹಿಂದೂ ಪಾದ್ ಪಾದ್ ಷಾಹಿ ಅಥವಾ ಹಿಂದೂ ಸಾಮ್ರಾಜ್ಯ ಸ್ಥಾಪನೆಯ ಆದರ್ಶವನ್ನು ಭೋದಿಸಿದನು. ಇದೊಂದು ಉತ್ತರ ಭಾರತದಲ್ಲಿ ಸಾಮ್ರಜ್ಯವನ್ನು ವಿಸ್ತರಿಸುವ ಕಲ್ಪನೆ.
32.) ಈ ಕೆಳಗಿನವುಗಳಲ್ಲಿ ಯಾರು ಸೇನಾಕರ್ತೆ ಎಂಬ ಬಿರುದುಗಳಿಸಿದ್ದವರು?
A). ಬಾಲಾಜಿ ವಿಶ್ವನಾಥ
B). ಬಾಲಾಜಿ ಬಾಜಿರಾವ
C). ಬಾಜಿರಾವ
D). ಬಾಹಿ
Correct Ans: (A)
Description:
ಬಾಲಾಜಿ ವಿಶ್ವನಾಥ
ಬಾಲಾಜಿ ವಿಶ್ವನಾಥನು ಮರಾಠಿ ಪ್ರಪ್ರಥಮ ಪೇಶ್ವೆ ಹಾಗೂ ಪೇಶ್ವೆ ಮನೆತನದ ಸಂಸ್ಥಾಪಕ. ಅನಂತರ ಧನಾಜಿ ಜಾದವನ ಮಗ ಚಂದ್ರಸೇನ ಜಾದವನ್ ಬಳಿ ಸೇವೆ ಮಾಡಿ "ಸೇನಾಕರ್ತೆ" ಎಂಬ ಬಿರುದು ಪಡೆದನು. 1712 ರಲ್ಲಿ ಸಾಹು ಬಾಲಾಜಿ ವಿಶ್ವನಾಥನನ್ನು ತನ್ನ ಸೇನಾಕರ್ತೆ (ಸೈನೈ ಸಂಘಟಕನಾಗಿ) ನೇಮಿಸಿಕೊಂಡನುhttp://www.youtube.com/channel/UCIY7hYEzySMzL1RMDkYdCmQ

Post a Comment